Crop Insurance Status: ಮೊಬೈಲ್ ಮೂಲಕ (mobile ) ಬೆಳೆ ವಿಮೆ (bele vime) ಹಣ ಜಮಾ (jama ) ಆಗಿದೆಯಾ ಇಲ್ಲವೋ (status ) ಎಂಬ ಸ್ಟೇಟಸ್ ಈ ರೀತಿ ಚೆಕ್ ಮಾಡಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಬೆಳೆ ವಿಮೆ ಯೋಜನೆ ಅಡಿಯಲ್ಲಿ ನೋಂದಾಯಿತ ರೈತರು ತಮ್ಮ ಅರ್ಜಿಯ ಸ್ಥಿತಿ ಯಾವ ಹಂತದಲ್ಲಿ ಇದೆ ಹಾಗೂ ಕಳೆದ ವರ್ಷ ಬೆಳೆ ವಿಮೆಯ ಹಣ ಎಷ್ಟು ಜಮಾ ಆಗಿದೆ ಮತ್ತು ಬೆಳೆ ವಿಮೆ ಹಣ ಪಡೆಯಲು ಏನು ಮಾಡಬೇಕು ಮತ್ತು ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡುವ ವಿವರದ ಬಗ್ಗೆ ನಾವು ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ಈ ಒಂದು ಲೇಖನವನ್ನು ಆದಷ್ಟು ರೈತರಿಗೆ ಹಾಗೂ ರೈತ ಕುಟುಂಬಗಳಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
ಅಕ್ಷಯ ತೃತೀಯ ಪ್ರಯುಕ್ತ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಇಳಿಕೆಯಾಗಿದೆ..! ಇಂದಿನ ಚಿನ್ನದ ದರ ಎಷ್ಟು.?
ಹೌದು ಸ್ನೇಹಿತರೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ರೈತರಿಗೆ ತಾವು ಬೆಳೆಗಳಿಗೆ ಬೆಳಗಿನ ಮಾಡಿಸಲು ಅವಕಾಶ ಮಾಡಿಕೊಡುತ್ತದೆ ಅದೇ ರೀತಿ ಈ ವರ್ಷವೂ ಕೂಡ ರೈತರಿಗೆ ಬೆಳಗಿನ ಮಾಡಲು ಅವಕಾಶ ಮಾಡಿಕೊಡಲಾಗಿದ್ದು ಆದ್ದರಿಂದ ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡುವ ವಿವರ ಹಾಗೂ ಕಳೆದ ವರ್ಷ ಬೆಳೆ ವಿನಯ ಎಷ್ಟು ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ರೈತರು ಚೆಕ್ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಸಂರಕ್ಷಣೆ ಹೊಸ ಪೋರ್ಟೆಲ್ಲನ್ನು ತೆರೆದಿದೆ ಇದರ ಮೂಲಕ ಸ್ಟೇಟಸ್ ಚೆಕ್ ಮಾಡುವ ವಿಧಾನವನ್ನು ತಿಳಿಯೋಣ
ಬೆಳೆ ವಿಮೆ ಅಂದರೆ ಏನು (Crop Insurance Status).?
ಹೌದು ಸ್ನೇಹಿತರು ತುಂಬಾ ಜನರಿಗೆ ಬೆಳೆ ವಿಮೆ ಅಂದರೆ ಏನು ಎಂಬ ಮಾಹಿತಿ ತಿಳಿದಿರುವುದಿಲ್ಲ ಹಾಗಾಗಿ ಈಗ ಮಾಹಿತಿ ತಿಳಿಯೋಣ.! ಬೆಳೆ ವಿಮೆ ಎಂದರೆ ರೈತರು ಮುಂಗಾರು ಹಂಗಾಮಿನಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಹೆಸರಿನ ಮೇಲೆ ವಿಮೆ ಮಾಡಿಸುವುದನ್ನು ಬೆಳೆ ವಿಮೆ ಎಂದು ಕರೆಯುತ್ತಾರೆ. ಇದರಿಂದ ರೈತರಿಗೆ ಪ್ರಕೃತಿ ವಿಕೋಪ ಅಥವಾ ಮಳೆಯ ಕಾರಣದಿಂದ ಅಥವಾ ಬರಗಾಲ ಅಥವಾ ಮುಂತಾದ ಕಾರಣಗಳಿಂದ ಬೆಳೆ ನಾಶ ಅಥವಾ ಹಾನಿ ಉಂಟಾದರೆ ಆ ವ್ಯಕ್ತಿಗೆ ಸರಕಾರ ಕಡೆಯಿಂದ ಅಥವಾ ವಿಮೆ ಕಂಪನಿ ಕಡೆಯಿಂದ ನಷ್ಟ ಪರಿಹಾರದ ಹಣ ತುಂಬಿಕೊಡಲು ಈ ಬೆಳೆ ವಿಮೆ ಸಹಾಯ ಮಾಡುತ್ತದೆ

ಹಾಗಾಗಿ ಪ್ರತಿಯೊಬ್ಬ ರೈತರು ಬೆಳೆ ವಿಮೆ ಮಾಡಿಸುವುದು ಕಡ್ಡಾಯವಾಗಿದ್ದು ಮತ್ತು ಕೇಂದ್ರ ಸರ್ಕಾರ ಕಡಿಮೆ ಹಣದಲ್ಲಿ ರೈತರಿಗೆ ಬೆಳೆ ವಿಮೆ ಮಾಡಿಸಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೆ ತಂದಿದೆ ಮತ್ತು ಈ ಯೋಜನೆ ಅಡಿಯಲ್ಲಿ ನೋಂದಾಯಿಸಿದ ರೈತರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಬೆಳೆ ವಿಮೆ ನೀಡಲಾಗುತ್ತದೆ ಇದರಿಂದ ರೈತರಿಗೆ ಮಳೆ ಅಥವಾ ಇತರ ಕಾರಣಗಳಿಂದ ಬೆಳೆ ಹಾಳಾದರೆ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ
ಬೆಳೆ ವಿಮೆಯ ಹಣ ಯಾವಾಗ ಜಮಾ ಆಗುತ್ತದೆ (Crop Insurance Status).?
ಸ್ನೇಹಿತರೆ ರೈತರು ಬೆಳೆ ವಿಮೆ ಮಾಡಿಸಿದರೆ ಹಾಗೂ ರೈತರ ಬೆಳೆ ಹಾನಿ ಉಂಟಾದರೆ ಅಥವಾ ನಷ್ಟ ಉಂಟಾದರೆ ಅಥವಾ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಉಂಟಾದರೆ ಅಂತ ರೈತರು ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯ ದಾಖಲಾತಿಗಳ ಸಮೇತ ಭೇಟಿ ನೀಡಿ ಈ ಬೆಳೆ ವಿಮೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟಂತ ಅಧಿಕಾರಿಗಳು ಅಥವಾ ಬೆಳೆ ಸಮೀಕ್ಷೆ ಮಾಡುವ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಯಾವ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂಬ ಮಾಹಿತಿಯನ್ನು ಸಮೀಕ್ಷೆ ಮಾಡಿ ವರದಿ ತಿಳಿದುಕೊಳ್ಳುತ್ತಾರೆ
ನಂತರ ರೈತರಿಗೆ ತಮ್ಮ ಬೆಳೆವಿಮೆ ಪರಿಹಾರ ನಿತ್ಯ ಆಧಾರ್ ನಂಬರ್ ಮೂಲಕ ರೈತರಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಅಥವಾ ರೈತರಿಗೆ ಪ್ರತಿವರ್ಷ ಮೇ ಮತ್ತು ಅಗಸ್ಟ್ ತಿಂಗಳ ಮಧ್ಯದಲ್ಲಿ ಇಂದಿನ ವರ್ಷ ಹಾಳಾದ ಬೆಳೆಯ ಪರಿಹಾರದ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ (Crop Insurance Status).?
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ರೈತರು ಸರಕಾರದ ಅಧಿಕೃತ ವೆಬ್ಸೈಟ್ ಅಥವಾ ಜಾಲತಾಣಕ್ಕೆ ಭೇಟಿ ನೀಡಬೇಕು ಇದಕ್ಕೆ ಸಂಬಂಧಿಸಿದ ಲಿಂಕನ್ನು ನಾವು ಕೆಳಗಡೆ ನೀಡುತ್ತೇವೆ
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ಮೇಲೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಸಂರಕ್ಷಣೆ (samrakshane) ಎಂಬ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪೋರ್ಟಲ್ಲಿಗೆ ಭೇಟಿ ನೀಡುತ್ತಿರಿ
- ನಂತರ ರೈತರು ಅಲ್ಲಿ ಬೆಳೆ ವಿಮೆ ಅಥವಾ ಇನ್ಸೂರೆನ್ಸ್ ಇಯರ್ ಎಂದು ಕಾಣುತ್ತದೆ ಅದರಲ್ಲಿ 2024 ಮತ್ತು 25 ಎಂದು ಸೆಲೆಕ್ಟ್ ಮಾಡಿಕೊಳ್ಳಿ
- ನಂತರ ರೈತರು ಅಲ್ಲಿ ಮುಂಗಾರು/kharif ಎಂದು ಸೆಲೆಕ್ಟ್ ಮಾಡಬೇಕು ನಂತರ go ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ರೈತರು ಅಲ್ಲಿ ನೀಡಿದ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಅಥವಾ ಇತರ ರಜಿಸ್ಟರ್ ನಂಬರ್ ಎಂಟರ್ ಮಾಡಬೇಕು
- ನಂತರ ಅಲ್ಲಿ ಕೊಟ್ಟಿರುವಂತ ಕ್ಯಾಪ್ಚರ್ ಕೋಡ್ ಎಂಟರ್ ಮಾಡಿ ಸರ್ಚ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮಗೆ ಬೆಳೆ ವಿಮೆಯ ಕಂಪನಿ ಹಾಗೂ ಅರ್ಜಿದಾರರ ಹೆಸರು ಮತ್ತು ಇತರ ಸ್ಥಿತಿಯ ಬಗ್ಗೆ ಮಾಹಿತಿ ತೋರಿಸುತ್ತದೆ
- ನಂತರ ನೀವು ಬೆಳೆ ವಿಮೆಯ ಹಣದ ಸ್ಟೇಟಸ್ ಚೆಕ್ ಮಾಡಲು ಅಲ್ಲಿ ಕೆಳಗಡೆ ಕಾಣುವ ಸೆಲೆಕ್ಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ರೈತರು ಅಲ್ಲಿ UTR ಡೀಟೇಲ್ಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ನಂತರ ಕೆಳಗಿನ ಕಾಲಲ್ಲಿ ಬೆಳೆ ವಿಮೆ ಹಣದ ಸ್ಟೇಟಸ್ ಚೆಕ್ ಮಾಡಲು ದಿನಾಂಕ ಮತ್ತು ವರ್ಷ ಆಯ್ಕೆ ಮಾಡಿಕೊಳ್ಳಿ.
- ನಂತರ ಅಲ್ಲಿ ನಿಮಗೆ ಇಲ್ಲಿವರೆಗೂ ಎಷ್ಟು ಬೆಳೆ ವಿಮೆಯ ಹಣ ಜಮಾ ಆಗಿದೆ ಹಾಗೂ ಬ್ಯಾಂಕ್ ಖಾತೆಯ ವಿವರ ಮತ್ತು ಹೆಸರು ಮುಂತಾದ ಡೀಟೇಲ್ಸ್ ಈ ಒಂದು ವೆಬ್ ಸೈಟ್ ನಲ್ಲಿ ನೋಡಬಹುದು
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ನಿಮಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ನಮ್ಮ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ ಇದರಿಂದ ನಿಮಗೆ ಎಲ್ಲಾ ಮಾಹಿತಿಗಳು ಬೇಗ ಸಿಗುತ್ತವೆ
1 thought on “Crop Insurance Status: ಮೊಬೈಲ್ ಮೂಲಕ ಬೆಳೆ ವಿಮೆ ಹಣ ಜಮಾ ಆಗಿದೆಯಾ ಇಲ್ಲವೋ ಎಂಬ ಸ್ಟೇಟಸ್ ಈ ರೀತಿ ಚೆಕ್ ಮಾಡಿ”