gruhalakshmi dbt status: ಗೃಹಲಕ್ಷ್ಮಿ ಯೋಜನೆ ಮೂಲಕ ಇಲ್ಲಿವರೆಗೂ ಎಷ್ಟು ಕಂತಿನ ಹಣ ಬಂದಿದೆ, ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿ.?
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಇಲ್ಲಿವರೆಗೂ ನೀವು ಲಕ್ಷ್ಮಿ ಯೋಜನೆಯ ಮೂಲಕ ಎಷ್ಟು ಕಂತಿನ ಹಣ ಪಡೆದುಕೊಂಡಿದ್ದೀರಿ ಎಂಬ ಮಾಹಿತಿಯನ್ನು ಯಾವ ರೀತಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡುವುದು ಎಂದು ತಿಳಿಯೋಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ತಿಂಗಳ ಹಣ ಯಾವಾಗ ಜಮಾ ಆಗುತ್ತೆ ಎಂಬ ಮಾಹಿತಿಯು ಕೂಡ ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನವನ್ನು ಆದಷ್ಟು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮತ್ತು ಸ್ನೇಹಿತರಿಗೆ ಶೇರ್ ಮಾಡಿ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಏಪ್ರಿಲ್ ತಿಂಗಳಲ್ಲಿ ಈ ದಿನಾಂಕದಂದು ಅವಕಾಶ ಇಲ್ಲಿದೆ ನೋಡಿ ಸಂಪೂರ್ಣ ವಿವರ
ಗೃಹಲಕ್ಷ್ಮಿ ಯೋಜನೆ (gruhalakshmi dbt status).?
ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ಕರ್ನಾಟಕದಲ್ಲಿ ಅಗಸ್ಟ್ 2023 ರಂದು ಜಾರಿಗೆ ತರಲಾಯಿತು.! ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಈ ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ.! ಸ್ನೇಹಿತರೆ ಈ ಗೃಹಲಕ್ಷ್ಮಿ ಯೋಜನೆಯ ಮೂಲಕ ಕಾಂಗ್ರೆಸ್ ಪಕ್ಷವು ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ನೀಡುವುದಾಗಿ ಭರವಸೆ ನೀಡಿತ್ತು ಅದೇ ರೀತಿ ಈ ಯೋಜನೆ ಮೂಲಕ ಇಲ್ಲಿವರೆಗೂ ಪ್ರತಿ ತಿಂಗಳು 2000 ಹಣ ನೀಡುತ್ತಾ ಬಂದಿದೆ

ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಯೋಜನೆಯಾಗಿದ್ದು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರು ಇಲ್ಲಿವರೆಗೂ ಸುಮಾರು 18 ಕಂತಿನ ಅಂದರೆ 36,000 ಹಣವನ್ನು ಈ ಒಂದು ಯೋಜನೆಯ ಮೂಲಕ ಮಹಿಳೆಯರು ನೇರವಾಗಿ ಬ್ಯಾಂಕ್ ಖಾತೆಗೆ ಪಡೆದುಕೊಂಡಿದ್ದಾರೆ.! ಹೌದು ಸ್ನೇಹಿತರೆ ಇಲ್ಲಿವರೆಗೂ ಮಹಿಳೆಯರು ಜನವರಿ ತಿಂಗಳವರೆಗೆ ಈ ಒಂದು ಯೋಜನೆ ಅಡಿಯಲ್ಲಿ ಹಣ ಪಡೆದುಕೊಂಡಿದ್ದಾರೆ ಮತ್ತು ಫೆಬ್ರವರಿ ತಿಂಗಳ ಹಣ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ತಿಳಿಸಿದ್ದಾರೆ
ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ತಿಂಗಳ 2000 ಹಣ ಯಾವಾಗ ಜಮಾ (gruhalakshmi dbt status).?
ಹೌದು ಸ್ನೇಹಿತರೆ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು 16 ಹಾಗೂ 17ನೇ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಮತ್ತು 18ನೇ ಕಂತಿನ ಹಣ ಕೆಲ ಮಹಿಳೆಯರಿಗೆ ಜಮಾ ಆಗಿದೆ ಹಾಗೂ ಇನ್ನು ಕೆಲ ಮಹಿಳೆಯರಿಗೆ ಜಮಾ ಆಗಿಲ್ಲ ಹಾಗಾಗಿ ಯಾವಾಗ ಜಮಾ ಆಗುತ್ತೆ ಎಂದು ಕಾಯುತ್ತಿದ್ದಾರೆ. ಅಂತ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಸ್ನೇಹಿತರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿರುವ ಪ್ರಕಾರ ಫೆಬ್ರವರಿ ತಿಂಗಳ ಹಣ ಈ ಏಪ್ರಿಲ್ 30ನೇ ತಾರೀಖಿನ ಒಳಗಡೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ
ಹೌದು ಸ್ನೇಹಿತರೆ ಫೆಬ್ರುವರಿ ತಿಂಗಳ ಈಗಾಗಲೇ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು ಕೆಲ ಮಹಿಳೆಯರ ಖಾತೆಗೆ ಈಗಾಗಲೇ ಹಣ ಜಮಾ ಆಗುತ್ತಿದೆ ಮತ್ತು ಇನ್ನು ಕೆಲ ಮಹಿಳೆಯರಿಗೆ ಹಣ ಜಮಾ ಆಗಿಲ್ಲ ಅಂತವರಿಗೆ ಈ ಏಪ್ರಿಲ್ ತಿಂಗಳಿನ ಒಳಗಡೆ ಹಣ ಜಮಾ ಆಗುತ್ತೆ ಎಂದು ಮಾಹಿತಿ ತಿಳಿಸಿದ್ದಾರೆ ಹಾಗೂ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣವು ಕೂಡ ಈ ತಿಂಗಳು ಜಮಾ ಮಾಡುವ ಎಲ್ಲಾ ಪ್ರಕ್ರಿಯೆ ಆರಂಭ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಹೌದು ಸ್ನೇಹಿತರೆ ತುಂಬಾ ಮಹಿಳೆಯರಿಗೆ ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿ ಇರುವುದಿಲ್ಲ ಅಂತಹ ಮಹಿಳೆಯರು ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ತುಂಬಾ ಸುಲಭವಾಗಿ ತಿಳಿದುಕೊಳ್ಳಲು ನಾವು ಕೆಳಗಡೆ ತಿಳಿಸಿದ್ದೇವೆ ಅದನ್ನು ನೋಡಿಕೊಂಡು ನೀವು ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿ ತಿಳಿದುಕೊಳ್ಳಬಹುದು
ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ವಿಧಾನ (gruhalakshmi dbt status).?
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಿಮಗೆ ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ಮೊಬೈಲ್ ಮೂಲಕ ತಿಳಿದುಕೊಳ್ಳುವ ವಿಧಾನವನ್ನು ನಾವು ಕೆಳಗಡೆ ವಿವರಿಸಿದ್ದೇವೆ ಅದನ್ನು ನೋಡಿ ನೀವು ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿ ತಿಳಿದುಕೊಳ್ಳಬಹುದು
ಹಂತ 1:- ಗೃಹಲಕ್ಷ್ಮಿ ಯೋಜನೆಯ ಹಣದ ಸ್ಟೇಟಸ್ ಚೆಕ್ ಮಾಡಲು ಹಾಗೂ ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿ ತಿಳಿಯಲು ಮೊದಲು ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ karntaka DBT ಸ್ಟೇಟಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
ಹಂತ 2:- ನಂತರ ನೀವು ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಓಪನ್ ಮಾಡಿ ನಂತರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಆಧಾರ್ ಕಾರ್ಡ್ ನಂಬರ್ ಎಂಟರ್ ನಂತರ ಆಧಾರ್ ನಂಬರ್ ರಿಜಿಸ್ಟರ್ ಗೆ ಓಟಿಪಿ ಬರುತ್ತೆ ಅದನ್ನು ಎಂಟರ್ ಮಾಡಿಕೊಂಡು ಈ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಬೇಕು
ಹಂತ 3:- ಅಲ್ಲಿ ಫಲಾನುಭವಿಯ ಎಲ್ಲಾ ಡೀಟೇಲ್ಸ್ ಹಾಗೂ ವಿವರಗಳು ನೋಡಲು ಸಿಗುತ್ತವೆ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.! ನಂತರ ನಿಮಗೆ ಅಲ್ಲಿ ನಾಲ್ಕು ಅಂಕಿಯ Mpin ಕ್ರಿಯೇಟ್ ಮಾಡಲು ಕೇಳುತ್ತದೆ ಅಲ್ಲಿ ನಿಮಗೆ ನೆನಪಿಗೆ ಬರುವಂತಹ ನಾಲ್ಕು ಅಂಕೆಯ ಸಂಖ್ಯೆಗಳನ್ನು ಮೇಲೆ ಮತ್ತು ಕೆಳಗಡೆ ಎಂಟರ್ ಮಾಡಿ
ಹಂತ 4:- ನಂತರ ನಿಮಗೆ ಈ ಒಂದು ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ ಅಲ್ಲಿ ನಿಮಗೆ payment status ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಗೃಹಲಕ್ಷ್ಮಿ ಸ್ಕೀಮ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
ಹಂತ 5:- ಅಲ್ಲಿ ನಿಮಗೆ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆ ಮೂಲಕ ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗೂ ಯಾವ ವರ್ಷದ ಮಾಹಿತಿ ಬೇಕು. ಆ ವರ್ಷವನ್ನು ಆಯ್ಕೆ ಮಾಡಿಕೊಂಡು ನಿಮಗೆ ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿ ಕೂಡ ತಿಳಿದುಕೊಳ್ಳಬಹುದು
ವಿಶೇಷ ಸೂಚನೆ:- ಸ್ನೇಹಿತರ ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಈ ಒಂದು ಲೇಖನೆಯನ್ನು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ತಲುಪುವವರೆಗೂ ಶೇರ್ ಮಾಡಿ ಹಾಗೂ ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು ಇದರಿಂದ ನಿಮಗೆ ಪ್ರತಿದಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಸಿಗುತ್ತದೆ
1 thought on “gruhalakshmi dbt status: ಗೃಹಲಕ್ಷ್ಮಿ ಯೋಜನೆ ಮೂಲಕ ಇಲ್ಲಿವರೆಗೂ ಎಷ್ಟು ಕಂತಿನ ಹಣ ಬಂದಿದೆ, ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿ.?”