Karnataka Rains: ಚಂಡಮಾರುತ ಎಫೆಕ್ಟ್- ಕೊಡಗು ರೆಡ್ ಅಲರ್ಟ್ ಹಾಗೂ ಬೆಂಗಳೂರು ಸೇರಿ 22 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ
ಕರ್ನಾಟಕದ ಪೂರ್ವ ಮುಂಗಾರು ಮಳೆ ಆರ್ಭಟ ಈಗಾಗಲೇ ಭರ್ಜರಿಯಾಗಿ ಶುರುವಾಗಿದೆ ಗುಡುಗು ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆ ಆಗುತ್ತಿದೆ. ಭಾರತೀಯ ಹವಮಾನ ಇಲಾಖೆ ಇದೀಗ ಕೊಡಗಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಅಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ತಿಳಿಸಲಾಗಿದೆ ಮತ್ತು ಮಂಗಳೂರಿನಲ್ಲಿ ಭರ್ಜರಿ ಮಳೆಯಾಗುತ್ತಿದೆ ಹಾಗೂ ನಮ್ಮ ರಾಜ್ಯಧಾನಿ ಬೆಂಗಳೂರು ಸೇರಿದಂತೆ ಇತರ 22 ಜಿಲ್ಲೆಗಳಲ್ಲಿ ಇಂದು ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ
ಹವಾಮಾನ ಇಲಾಖೆ ಮುನ್ನೆಚ್ಚರಿಕೆ (Karnataka Rains).?
ಹೌದು ಸ್ನೇಹಿತರೆ ಆಂಧ್ರಪ್ರದೇಶದ ಕರಾವಳಿ ಮಧ್ಯಭಾಗದಲ್ಲಿ ಮತ್ತು ನೆರೆ ಹೊರೆ ಪ್ರದೇಶಗಳಲ್ಲಿ ಭರ್ಜರಿ ಚಂಡಮಾರುತ ಚಾಲನೆ ಆಗುತ್ತಿದೆ ಇದರಿಂದ ನಮ್ಮ ಕರ್ನಾಟಕದ ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವೊಂದು ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಸಾಧಾರಣ ಮಳೆ ಆಗಲಿದೆ ಎಂದು ನಮ್ಮ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.!

ಹೌದು ಸ್ನೇಹಿತರೆ ಸೋಮವಾರ ಬೆಂಗಳೂರು ನಗರ ಸೇರಿದಂತೆ ಹಲವಡೆ ಭಾರಿ ಮಳೆಯಾಗಿದೆ ಹಾಗೂ ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಆಗುತ್ತಿದೆ ಅದರಲ್ಲಿ ಪ್ರಮುಖವಾಗಿ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ RR ಪುರದಲ್ಲಿ 4 ಸೆಂಟಿಮೀಟರ್ ಮತ್ತು ಧರ್ಮಸ್ಥಳದಲ್ಲಿ 3 ಸೆಂಟಿಮೀಟರ್ ಹಾಗೂ ಚಿಕ್ಕಮಂಗಳೂರು ಮತ್ತು ವಿಜಯಪುರ ಜಿಲ್ಲೆ ಮತ್ತು ಮೈಸೂರು ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯಲ್ಲಿ 1 ಸೆಂಟಿಮೀಟರ್ ಮಳೆ ಸುರಿದಿದೆ
ಇಂದು ಯಾವ ಜಿಲ್ಲೆಯಲ್ಲಿ ಮಳೆ ಆಗಲಿದೆ (Karnataka Rains).?
ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಇಂದು ಅಂದರೆ 15 ಏಪ್ರಿಲ್ 2025 ರಂದು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಉಡುಪಿ, ಮೈಸೂರು, ಚಿಕ್ಕಮಂಗಳೂರು, ಹಾಸನ, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ರಾಮನಗರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಹಾಗೂ ಚಿತ್ರದುರ್ಗ , ರಾಯಚೂರು, ದಾವಣಗೆರೆ, ಕೋಲಾರ, ಬೆಳಗಾವಿ, ಕೊಪ್ಪಳ, ದಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಮಲೆನಾಡಿನ ಭಾಗದಲ್ಲಿ ಭಾರಿ ಮಳೆ (Karnataka Rains).?
ಹೌದು ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ಸೋಮವಾರ & ಮಂಗಳವಾರ ವ್ಯಾಪಕ ಮಳೆ ಆಗಲಿದೆ ಎಂದು ಮಾಹಿತಿ ತಿಳಿಸಿದೆ ಹಾಗೂ ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಈ ಮಳೆಯ ಕಾರಣದಿಂದ ವಿದ್ಯುತ್ ಕಂಬ ಹಾಗೂ ಮರಗಳು ಬೀಳುವ ಅಪಾಯವಿದೆ ಮತ್ತು ನಷ್ಟ ಸಂಭವಿಸಬಹುದು ಎಂದು ಮುನ್ನೆಚ್ಚರಿಕೆ ಕ್ರಮ ಈಗಾಗಲೇ ಜಿಲ್ಲಾಡಳಿತ ಘೋಷಿಸಲಾಗಿದೆ ಇದರ ಜೊತೆಗೆ ಕೊಡಗು ಜಿಲ್ಲೆಯಲ್ಲಿ ಬಾರಿ ಬಿರುಗಾಳಿ ಮತ್ತು ಸಿಡಿಲಿನ ಮಳೆ ಆಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ
ಮಾಗಡಿ ತಾಲೂಕಿನ ಆಲಿಕಲ್ಲು ಮಳೆ (Karnataka Rains).?
ಹೌದು ಸ್ನೇಹಿತರೆ ಮಾಗಡಿ ತಾಲೂಕಿನಲ್ಲಿ ವಿವಿಧಡೆ ಸೋಮವಾರ ಸಂಜೆ ಬಿರುಗಾಳಿ ಸಹಿತ ಬಾರಿ ಮಳೆಯಾಗಿದೆ ಇದರ ಜೊತೆಗೆ ಕೆಲವೊಂದುಡೆ ಆಲಿಕಲ್ಲು ಮಳೆಯಾಗಿದೆ ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ ಎಂದು ಹೇಳಬಹುದು.! ಮಾಗಡಿ ತಾಲೂಕಿನ ವೀರೇಗೌಡನ ದೊಡ್ಡಿ ಭಾಗದಲ್ಲಿ ಭಾರಿ ಆಲಿಕಲ್ಲು ಸಹಿತ ಮಳೆ ಸುರಿದಿದೆ ಇದರಿಂದ ರೈತ ರಾಜೇಶನ ಬೆಳೆ ಸರ್ವನಾಶವಾಗಿದೆ ಮತ್ತು 3800 ಟಮೋಟ ಸಸಿಗಳು ಹಾಳಾಗಿವೆ.! ಇಂಥ ಸಂದರ್ಭದಲ್ಲಿ ಸರಕಾರ ರೈತರಿಗೆ ಸಹಾಯ ಮಾಡಬೇಕು ಎಂದು ರಾಜೇಶ್ ಅವರು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ
ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಜನ ತತ್ತರ (Karnataka Rains).?
ಹೌದು ಸ್ನೇಹಿತರೆ, ಸೋಮವಾರ ಸಂಜೆ ತಂದೂರಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ ಇದರಿಂದ ಜನ ತತ್ತರಿಸಿ ಹೋದರು ಹೌದು ಸ್ನೇಹಿತರೆ, ಸಂಜೆ 4:00ಗೆ ಆರಂಭವಾದ ಆಲ್ಲಿ ಕಲ್ಲು ಮಳೆ ಬಾರಿ ಬಿರುಗಾಳಿಯಿಂದ ರಸ್ತೆ ಚರಂಡಿ ಹಾಗೂ ಹೊಂಡಗಳು ತುಂಬಿ ಹರಿದಿವೆ ಇದರಿಂದ ತಂದೂರಿನ ಒಂಟಿ ಆಲದ ಮರದ ಬಳಿ ರೈತರ ಕೆ.ಟಿ ಶ್ರೀನಿವಾಸ ಅವರ ಒಂದುವರೆ ಎಕರೆ ಜಮೀನಿನ ಬಾಳಿ ಗಿಡ ಫೈರು ನಾಶವಾಗಿದೆ ಮತ್ತು ರೈತರ ಹಲವಾರು ಬೆಳೆಗಳು ಕಟಾವಿಗೆ ಬಂದಿದ್ದು ಈ ಮಳೆಯಿಂದ ಆ ಬೆಳೆಗಳು ಕೂಡ ನಾಶವಾಗಿವೆ ಒಂದು ಅಂದಾಜಿನ ಪ್ರಕಾರ ಈ ಒಂದು ಊರಿನಲ್ಲಿ ನಾಲ್ಕರಿಂದ ಐದು ಲಕ್ಷದವರೆಗೆ ನಷ್ಟ ಉಂಟಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ ಈ ಬಗ್ಗೆ ಶಾಸಕರು ಮತ್ತು ಸಂಸದರು ಹಾಗೂ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಆದಷ್ಟು ಈ ಲೇಖನಿಯನ್ನು ನಿಮ್ಮ ಸ್ನೇಹಿತರು ಹಾಗೂ ರೈತರಿಗೆ ಮತ್ತು ಆತ್ಮೀಯರಿಗೆ ಈ ಒಂದು ಲೇಖನವನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ (WhatsApp) ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ (Teligram) ಚಾನಲ್ ಗಳಿಗೆ (join) ಸೇರಿಕೊಳ್ಳಿ ಇದರಿಂದ (daily News) ಪ್ರತಿದಿನ ಹೊಸ ಮಾಹಿತಿಗಳು ಸಿಗುತ್ತವೆ
1 thought on “Karnataka Rains: ಚಂಡಮಾರುತ ಎಫೆಕ್ಟ್- ಕೊಡಗು ರೆಡ್ ಅಲರ್ಟ್ ಹಾಗೂ ಬೆಂಗಳೂರು ಸೇರಿ 22 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ”