e shram Card Apply Online: ಇ- ಶ್ರಮ್ ಕಾರ್ಡ್ ಇದ್ದವರಿಗೆ ಸಿಗಲಿದೆ ಪ್ರತಿ ತಿಂಗಳು 3000 ಹಣ, ಈ ರೀತಿ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೇ ನಿಮ್ಮ ಹತ್ತಿರ ಈ ಶ್ರಮ ಕಾರ್ಡ್ ಇದ್ದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣ ಸಿಗುತ್ತೆ. ಹಾಗಾಗಿ ಈ ಒಂದು ಲೇಖನ ಮೂಲಕ ಈ ಶ್ರಮ ಕಾರ್ಡ್ ಅಂದರೆ ಏನು.? ಹಾಗೂ ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ.? ಹಾಗೂ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಯಾರು ಅರ್ಹತೆ ಹೊಂದಿರುತ್ತಾರೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರ ಹಾಗೂ ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕ್ ಮುಂತಾದ ವಿವರಗಳಿಗೆ ಸಂಬಂಧಿಸಿದಂತೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ ಆದ್ದರಿಂದ ಈ ಒಂದು ಲೇಖನನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ
ಇ- ಶ್ರಮ್ ಕಾರ್ಡ್ ಅಂದರೆ ಏನು (e shram Card Apply Online)..?
ಸ್ನೇಹಿತರೆ ನಮ್ಮ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಹಾಗೂ ದಿನಗೂಲಿ ಕೆಲಸ ಮಾಡುವಂತಹ ಜನರಿಗೆ ಮತ್ತು ರೈತ ಕುಟುಂಬಗಳಿಗೆ ಹಾಗೂ ಬಡವರ್ಗದ ಜನರಿಗೆ 60 ವರ್ಷ ದಾಟಿದ ನಂತರ ಗ್ಯಾರಂಟಿಯಾಗಿ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿ ರೂಪದಲ್ಲಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ- ಶ್ರಮ್ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ ಹಾಗಾಗಿ ಪ್ರತಿಯೊಬ್ಬ ಕೂಲಿ ಕಾರ್ಮಿಕ ಹಾಗೂ ದಿನಗೂಲಿ ಕೆಲಸ ಮಾಡುವಂಥವರು ಮತ್ತು ಬಡವರು ಈ ಒಂದು ಯೋಜನೆ ಲಾಭ ಪಡೆದುಕೊಳ್ಳಿ

ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಕೇಂದ್ರ ಸರ್ಕಾರ ಬಡ ವರ್ಗದ ಜನರಿಗೆ ಹಾಗೂ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಮತ್ತು ಕಾರ್ಮಿಕ ವರ್ಗದ ಜನರಿಗೆ ಹಾಗೂ ರೈತ ಕುಟುಂಬಗಳಿಗೆ ಹಾಗೂ ದಿನಗೂಲಿ ಮಾಡುವಂತಹ ಜನರಿಗೆ 60 ವರ್ಷ ದಾಟಿದ ನಂತರ ಅಥವಾ ತಮ್ಮ ವೃದ್ಧಾಪ್ಯ ಜೀವನದಲ್ಲಿ ಪಿಂಚಣಿ ಪಡೆಯಲು ಸರಕಾರ ಕಡೆಯಿಂದ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಒಂದು ಯೋಜನೆ ಜಾರಿಗೆ ತರಲಾಗಿದೆ ಹಾಗಾಗಿ ಈ ಯೋಜನೆ ಲಾಭಗಳು ಹಾಗೂ ಉಪಯೋಗಗಳನ್ನು ನಾವು ಕೆಳಗಡೆ ಪಟ್ಟಿ ಮಾಡಿದ್ದೇವೆ
ಇ- ಶ್ರಮ್ ಕಾರ್ಡ್ ಯೋಜನೆಯ ಪ್ರಮುಖ ಉಪಯೋಗಗಳು (e shram Card Apply Online).?
ಪ್ರತಿ ತಿಂಗಳು 3000 ಹಣ ಸಿಗುತ್ತೆ:- ಇ- ಶ್ರಮ್ ಕಾರ್ಡ್ ಯೋಜನೆಯ ಪ್ರಮುಖ ಉದ್ದೇಶ ಅಥವಾ ಪ್ರಮುಖ ಉಪಯೋಗವೇನೆಂದರೆ ಈ ಒಂದು ಯೋಜನೆ ಅಡಿಯಲ್ಲಿ ಇ- ಶ್ರಮ್ ಕಾರ್ಡ್ ಪಡೆದುಕೊಂಡಂತ ಜನರಿಗೆ ಅಥವಾ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿದಂತ ಜನರಿಗೆ ತಮ್ಮ ವೃದ್ಧಾಪ್ಯ ಜೀವನದಲ್ಲಿ ಅಥವಾ 60 ವರ್ಷ ದಾಟಿದ ನಂತರ 3000 ಹಣವನ್ನು ಮಾಸಿಕ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಅರ್ಜಿ ಸಲ್ಲಿಸಿದ ಫಲಾನುಭವಿಗಳು ಪಡೆದುಕೊಳ್ಳಬಹುದು
2 ಲಕ್ಷದವರೆಗೆ ಮರಣ ವಿಮೆ:- ಇ- ಶ್ರಮ್ ಕಾರ್ಡ್ ಯೋಜನೆಗೆ ಅಥವಾ ಶ್ರಮಿಕ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳ ಕುಟುಂಬಗಳಿಗೆ ಅಥವಾ ನಾಮಿನಿಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿ ಯಾವುದೇ ಸಂದರ್ಭದಲ್ಲಿ ಅಥವಾ ಕೆಲಸದ ಸಂದರ್ಭದಲ್ಲಿ ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಎರಡು ಲಕ್ಷದವರೆಗೆ ಮರಣ ವಿಮೆಯನ್ನು ಈ ಶ್ರಮ ಕಾರ್ಡ್ ಹೊಂದಿದವರಿಗೆ ನೀಡಲಾಗುತ್ತದೆ ಮತ್ತು ಈ ಹಣವನ್ನು ನೇರವಾಗಿ ಅರ್ಜಿದಾರ ಫಲಾನುಭವಿಗಳ ಕುಟುಂಬಗಳಿಗೆ ನೀಡಲಾಗುತ್ತದೆ
1 ಲಕ್ಷದವರೆಗೆ ಆರ್ಥಿಕ ನೆರವು:– ಇ- ಶ್ರಮ್ ಕಾರ್ಡ್ ಯೋಜನೆಯ ಪ್ರಮುಖ ಇನ್ನೊಂದು ಉಪಯೋಗವೇನೆಂದರೆ ಅದು ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಥವಾ ಇತರ ಯಾವುದೇ ಅಪಘಾತಕ್ಕೆ ಒಳಗಾದರೆ ಅಂತ ಸಂದರ್ಭದಲ್ಲಿ ಈ ಶ್ರಮ ಕಾಡು ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಒಂದು ಲಕ್ಷ ರೂಪಾಯಿವರೆಗೆ ವೈದ್ಯಕೀಯ ವೆಚ್ಚಕ್ಕೆ ಅಥವಾ ಆಸ್ಪತ್ರೆಯ ಖರ್ಚಿಗಾಗಿ ರೂ.1,00,000 ದವರೆಗೆ ಆರ್ಥಿಕ ನೆರವು ಪಡೆಯಬಹುದು
ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷದ ಒಳಗಿನವರು ಅರ್ಜಿ ಸಲ್ಲಿಸಲು ಅವಕಾಶವಿದೆ
- ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕಡ್ಡಾಯವಾಗಿ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಅಥವಾ ದಿನಗೂಲಿ ಮಾಡುವಂತಹ ಜನರು ಅಥವಾ ರೈತ ಕುಟುಂಬದವರು ಅಥವಾ ಬಡವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
- ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
- ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಸರಕಾರಿ ನೌಕರಿಗೆ ಹಾಗೂ ಇತರ ಖಾಸಗಿ ನೌಕರರಿಗೆ ಅವಕಾಶ ಇರುವುದಿಲ್ಲ
ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಅರ್ಜಿದಾರರ ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಕಾರ್ಮಿಕ ಕಾರ್ಡ್ ಅಥವಾ ಜಾಬ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಕೇಂದ್ರ ಸರ್ಕಾರದ ಈ ಶ್ರಮ ಪೋರ್ಟಲ್ ಮೂಲಕ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕ್ ಕೆಳಗಡೆ ನೀಡಿದ್ದೇವೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ನಿಮಗೆ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಬಯಸುತ್ತಿದ್ದೀರಾ ಹಾಗೂ ವಿವಿಧ ಸರಕಾರಿ ಯೋಜನೆಗಳ ಸಬ್ಸಿಡಿ ಮಾಹಿತಿ ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಸಬ್ಸಿಡಿ ಯೋಜನೆಗಳು ಮತ್ತು ನಮ್ಮ ಕರ್ನಾಟಕದಲ್ಲಿ ಜಾರಿಗೆ ಇರುವ ಯುವನಿಧಿ ಯೋಜನೆಯ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಬಯಸುತ್ತಿದ್ದಾರೆ ನಮ್ಮ ವಾಟ್ಸಾಪ್ ಚಾನೆಲ್ ಗಳಿಗೆ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಜೈನ್ ಆಗಬಹುದು ಇದರಿಂದ ಪ್ರತಿದಿನ ಮಾಹಿತಿ ಸಿಗುತ್ತದೆ